Friday, February 20, 2009

ಭಾಗ ೪

೧೩)
ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆ ಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆ ತುಂಬಿದ ತೋಳ ಮಲಗೀತುಃ ನೀಂ ಪೆರರ
ದಿಟ್ಟಿಸುತ ಕರಬುವೆಯೊ ಮಂಕುತಿಮ್ಮ

೧೪)
ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು
ಗುಪ್ತದಲಿ ಕೊಳೆಯುತ್ತೆ ವಿಷ ಬೀಜವಾಗಿ
ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ
ಸುಪ್ತವಹುದೆಂತಿಚ್ಛೆ ಮಂಕುತಿಮ್ಮ

೧೫)
ಸಿರಿಮಾತ್ರಕೀನಲ್ಲ, ಪೆಣ್ಮಾತ್ರಕೇನಲ್ಲ
ಕರುಬಿ ಜನ ಕೆಸರುದಾರಿಯಲಿ ಸಾಗುತಿಹುದು
ಬಿರುದು ಗಳಿಸಲಿಕೆಸಪ, ಹೆಸರ ಪಸರಿಸಲೆಸಪ
ದುರಿತಗಳ್ಗೆಣೆಯುಂಟೆ ಮಂಕುತಿಮ್ಮ

೧೬)
ಬಾಳ್ಕೆಯಲಿ ನೂರೆಂಟು ತೊಡಕು ತಿಣುಕುಗಳುಂಟು
ಕೇಳ್ಕೆಮಾಣ್ಕೆಗಳಿಗವು. ಜಗ್ಗವೊಂದಿನಿಸುಂ
ಗೋಳ್ಕರೆದರೇನು ಫಲ? ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೊ ಮಂಕುತಿಮ್ಮ

೧೭)
ಮನೆಯ ತೊರೆದೊಡಲೇಂ? ವನಗುಹೆಯ ಸಾರಲೇಂ?
ತನುವನುಗ್ರವ್ರತಗಳಿಂದೆ ದಂಡಿಸಲೇಂ?
ಬಿನದಗಳನರಸಿ ನೀನೂರೂರೊಳಲೆದೊಡೇಂ?
ಮನವ ತೊರೆದಿರಲಹುದೆ ಮಂಕುತಿಮ್ಮ

೧೮)
ವನದಿ ನಿರ್ಜನದಿ ಮೌನದಿ ತಪವನೆಸಗುವ
ನೆನಪಿನಲಿ ಪಿಂತಿನನುಭವವುಳೀಯದೇನು?
ಇನಿನೋಟ ಸವಿಯೂಟ, ಕಿನಿಸು ಕರಬುಗಳಾಟ
ಕನಲುತಿಹುವಾಳದಲಿ ಮಂಕುತಿಮ್ಮ

೧೯)
ಗೋಳಡಲುಂ ಬೇಡ ಲೋಲಾಪ್ತಿಯುಂ ಬೇಡ |
ಬಾಳು ಪರಚೇತನದ ಕೇಳಿಯೆಂದೆಣಿಸಿ ||
ಪಾಲಿಗನು ನೀನದರೊಳನಿಪಂತೆ ಬಾಳುತಿರು |
ಕೇಳಿಯುಂ ಧರ್ಮವೆಲೋ ಮಂಕುತಿಮ್ಮ ||

೨೦)
ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- |
ರೊಳಿಗವ ತಪ್ಪಿಸುವ ಜಾಣನೆಲ್ಲಿಹನು? ||
ಊಳಿಗವೊ ಕಾಳಗವೊ ಕೂಳ್ಕರೆಯೊ ಗೋಳ್ಕರೆಯೊ |
ಬಾಳು ಬಾಳದೆ ಬಿಡದು ಮಂಕುತಿಮ್ಮ ||

೨೧)
ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |
ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ||
ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ |
ಪೂರ್ತಿಯಿದನರಿಯೆ ಸೊಗ ಮಂಕುತಿಮ್ಮ ||

೨೨)
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |
ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ |
ನೆದುರು ನಿಲೆ ಬಿದಿಯೊಲಿವ ಮಂಕುತಿಮ್ಮ ||

೨೩)
ಮನೆಯೆ ಮಠವೆಂದು ತಿಳಿ, ಬಂಧುಬಳಗವೆ ಗುರುವು |
ಅನವತಪರಿಚರ್ಯೆಯವರೊರೆವ ಪಾಠ |
ನಿನಗುಳಿವ ಜಗವ ಮುಟ್ಟಿಪ ಸೇತು ಸಂಸಾರ |
ಮನಕೆ ಪುಟಸಂಸ್ಕಾರ ಮಂಕುತಿಮ್ಮ ||

೨೪)
ತತ್ವ ಸಾಕ್ಷಾತ್ಕಾರ ಚಿತ್ತಶುದ್ದಿಯಿನಹುದು |
ಚಿತ್ತಶೋಧನೆ ಮತಿಚಮತ್ಕಾರವಲ್ಲ ||
ಬಿತ್ತರದ ಲೋಕಪರಿಪಾಕದಿಂ ಸತ್ಕರ್ಮ |
ಸಕ್ತಿಯಿಂ ಶುದ್ಧತೆಯೊ ಮಂಕುತಿಮ್ಮ ||

೨೫)
ದ್ರಾಕ್ಷಿ ರಸವೇನಲ್ಲ ಜೀವನದ ತಿರುಳರ್ಗಮ್ |
ಇಕ್ಷು ದಂಡದವೊಲದು ಕಷ್ಟ ಭೋಜನವೆ ||
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |
ಮಾಕ್ಷಿಕರು ಮಿಕ್ಕೆಲ್ಲ ಮಂಕುತಿಮ್ಮ ||

೨೬)
ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||
ಕೀಳ ಮೇಲಾಗಿಪನು ಮೇಲ ಕೀಳಾಗಿಪನು |
ತಾಳುಮೆಯಿನಿರು ನೀನು ಮಂಕುತಿಮ್ಮ ||

೨೭)
ಬದುಕು ಜಟಕಾಬಂಡಿ ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ||

೨೮)
ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು |
ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ||
ಹದವರಿದು ವಿಧಿ ತಾನೆ ಕುದುರಿಸುವನೆಲ್ಲವನು |
ಅದಟದಿರು ನೀನವನ ಮಂಕುತಿಮ್ಮ ||

೨೯)
ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |
ಬೇಡಲೊಳಿತಾವುದೆಂಬುದರರಿವುಮಿಲ್ಲ ||
ಕೂಡಿಬಂದುದನೆ ನೀನ್ ಅವನಿಚ್ಚೆ ಎಂದು ಕೊಳೆ |
ನೀಡುಗೆದೆಗಟ್ಟಿಯನು ಮಂಕುತಿಮ್ಮ ||

೩೦)
ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು |
ಚರಿಕೆ ತಾರಾಗ್ರಹಗಳಿಷ್ಟವೋದಂತೆ ||
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ |
ಸ್ಠಿರಚಿತ್ತ ನಿನಗಿರಲಿ ಮಂಕುತಿಮ್ಮ ||

೩೧)
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? |
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||
ಸಹಿಸದಲ್ಲದೆ ಮುಗಿವ ದಾವದಶೆ ಬಂದೊಡಂ |
ಸಹನೆ ವಜ್ರದ ಕವಚ ಮಂಕುತಿಮ್ಮ ||

೩೨)
ಮನವನಾಳ್ವುದು ಹಟದ ಮಗುವನಾಳುವ ನಯದೆ |
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ||
ಅನುಕೂಲಿಸದು ಬರಿಯ ಕೂಗು ಬದಿತಗಳಿದನು |
ಇನಿತಿತ್ತುಮರಸಿನಿತ ಮಂಕುತಿಮ್ಮ ||

೩೩)
ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ |
ತಳದ ಕಸ ತೇಲುತ್ತ ಬಗ್ಗಡವದಹುದು ||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ |
ತಿಳಿಯಹುದು ಶಾಂತಿಯಲಿ ಮಂಕುತಿಮ್ಮ ||

೩೪)
ಕುದಿ ಹೆಚ್ಚೆವೆಗಟಹುದು; ಕಡಿಮೆಯಿರೆ ಹಸಿನಾತ |
ಕದಡಲೊಡೆವುದು ಹಾಲು; ಕೂಕ್ಷ್ಮವದರಹದ ||
ಅದವೊಲೆ ಮನದ ಹದ, ಅದನೆಚ್ಚದಿ ನೋಡು |
ಬದುಕು ಸೊಗಹದರಿಂದ ಮಂಕುತಿಮ್ಮ ||

೩೫)
ದೇವ ಮಂದಿರ ಭಜನೆ ಪೂಜೆ ಪ್ರಸಾದಗಳು |
ಜೀವನದಲಂಕಾರ, ಮನಸಿನುದ್ಧಾರ ||
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- |
ದಾವುದಾದೊಡಮೊಳಿತು ಮಂಕುತಿಮ್ಮ ||

೩೬)
ಕಲ್ಮಷದ ವಾಲ್ಮೀಕವೆಂದೊಡಲ ಜರೆಯದಿರು |
ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ||
ಹಮ್ಮುಳ್ಳ ಹರಿವ ಕಾಪಿಟ್ಟು ಕಡಿವಣ ತೊಡಿಸೆ |
ನಮ್ಮ ಗುರಿಗೈದಿಪುದು ಮಂಕುತಿಮ್ಮ ||

೩೭) Continue P22

No comments:

Post a Comment

I am underqualified for the task I have taken but I have taken it anyway and pray to the Lord that I do at least 0.001% justice to it. So I request you to provide constructive comments that can make this blog a better and more useful one.