Sunday, February 8, 2009

ಭಾಗ ೨

೪)
ಏನು ಪ್ರಪಂಚವಿದು! ಏನು ಧಾಳಾಧಾಳಿ |
ಏನದ್ಭುತಾಪಾರ ಶಕ್ತಿ ನಿರ್ಘಾತ ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ ಮಂಕುತಿಮ್ಮ ||

೫)
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||
ಒಂದೇ ಗಾಳಿಯುನುಸಿರ್ವ ನರಜಾತಿಯೊಳಗಿಂತು |
ಬಂದದೀ ವೈಷಮ್ಯ ಮಂಕುತಿಮ್ಮ ||

೬)
ಬೆದಕಾಟ ಬದುಕೆಲ್ಲ; ಕ್ಷಣಕ್ಷಣವು ಹೊಸಹಸಿವು |
ಅದಕಾಗಿ ಇದಕಾಗಿ ಮತ್ತೊಂದಕ್ಕಾಗಿ ||
ಅಧಿಕಾರ ಸಿರಿಸೊಗಸು ಕೀರ್ತಿಗಳ ನೆನೆದು ಮನ |
ಕುದಿಯುತಿಹುದಾವಗಂ ಮಂಕುತಿಮ್ಮ ||

ಕಗ್ಗ, ಮೊದಲನೇ ಪ್ರಯತ್ನ

Whats life if one has not tasted the Ganga, whats life if one has not read the Bhagawad Gita, whats life if one has not lived it to its minimum potential; Life is incomplete (or even waste) if one has not read the Bhagawad Gita, all our great scholars seem to proclaim time and again. I even remember hearing a lecture where Swami Brahmananda says that as Kannadiga to not have read and appreciated Mankutimmana Kagga is the same as above, a wasted opportunity. I dont may not go to that extent, but certainly feel that life is even more meaningful if we get our toes wet, if we could sip even a tiny droplet, even if we can sit back and feel amazed at the vastness and greatness of such oceans of knowledge and wisdom.

I am not an expert in this subject but should that stop me in my "ಅಳಿಲು ಸೇವೆ"? So this my own little contribution, a tribute to the great, under-appreciated epci of/in/for/by Kannada/Kannadiga/World.

I dont think anyone who has read even pieces of this work would hesitate to say that there has seldom been a work in Indian literature as great as this one - the Mankutimmana Kagga, from the pen of Kannada literary supremo, the genious D.V. Gundappa, popularly known as DVG. A work that has left, without a doubt, most greats mesmerized and spellbound. In this amazing work, the creative genius in DVG explores life, its meaning, and also the perfect way to live it. He proposes that he has used the form of a song so as to make it easy for the mortals like us to recall. Its a privilege that DVG delivered this great work in the same era that we live in.

Many consider Mankutimmana Kagga as Bhagawad Gita in Kannada, but I am not sure if that analogy can be taken on its face value. I would certainly agree, without much doubt, that in Mankutimmana Kagga DVG packages the essense of Bhagawad Gita, Upanishads, Vedas in a manner and form that is concise enough so as can be applied to life - day-in & day-out. If Bhagawad Gita is a philosophical phenomenon, Mankutimmana Kagga is a manual for daily practice.

Finally, I take this opportunity to spend sometime first towards typing the entire work and then start getting deeper into each of these gems. I wish to translate this to English in future, I pray to the Lord to give me the strength, wisdom, capability, and capacity to do even 1% justice to this unparalleled work.

I plan to explore all of the Kagga verses on a different blog: http://kaggasaara.blogspot.com/ But for now I will pick and explore only some of the selected kaggas.

Shri Krishnarpanam.

ಈ ಪ್ರಯತ್ನದ ಮೊದಲನೆಯ ಹಂತದಲ್ಲಿ ಕೇವಲ ಪಧ್ಯಗಳನ್ನ ಮುದ್ರಿಸಿ ಆನಂತರ ಇವುಗಳ ಆಳಕ್ಕೆ ಹೋಗೋ ಪ್ರಯತ್ನವನ್ನ ಮಾಡೋಣ ಅಂತ ಈ ಯತ್ನ! ಕನ್ನಡದ ಭಗವದ್ ಗೀತ ಎಂದೆ ಹೇಳ್ತಾರೆ, ಇದು ಭಗವದ್ ಗೀತೆಯಲ್ಲದಿದ್ದರೂ ಇದರಲ್ಲಿ ಸರ್ವ ವೇದಗಳ ಸಾರವನ್ನ ಕಾಣಬಹುದು ಅಂತ ಮಾತ್ರ ವೋಪ್ಪಲೇ ಬೇಕು! ಭಗವದ್ ಗೀತೆ ಆಧ್ಯಾತ್ಮಿಕ ದಿಕ್ಕಿನಲ್ಲಿ ಸಾಗಿದರೆ ಕಗ್ಗ ಜೀವನದ ಅರ್ಥವನ್ನ, ಬಾಳುವ ರೀತಿಯನ್ನ ಸಾರಿ, ಜೀವನದಲ್ಲಿ ಗೀತೆಯನ್ನ ಅಳವಡಿಸೋ ಅಂತ ದಾರಿಯಲ್ಲಿ ತಂದು ಬಿಡುತ್ತೆ, ಇದು ನನ್ನ ಅನಿಸಿಕೆ! ಇದರಲ್ಲಿ ನಮ್ಮ ಡೀ.ವೀ.ಜಿಯವರು ಅತ್ಯಂತ ಸುಂದರವಾದ ರೀತಿಯಲ್ಲಿ ಪದಗಳನ್ನ ಜೋಪಾನದಿಂದ ಜೋಡಿಸಿ, ಅಲಂಕರಿಸಿ, ಆ ಭಗವಂತನಿಗೆ ಅರ್ಪಿಸುತ್ತಾರೆ! ಈ ಆಯ್ದ ಮೌಲ್ಯವಾದ, ಅಪರೂಪದ ಹೂಗಳಿಂದ ಪೊಣಿಸಿರೋ ಈ ಮಾಲೆಯನ್ನ ಆ ಭಗವಂತನ ಕೃಪೆ ಇಲ್ಲದೆ ರಚಿಸಲು ಸಾಧ್ಯವೇ ಇಲ್ಲಾ ಅನ್ನೋದು ಅಕ್ಷರಸಹ ಸತ್ಯ!!

ಮೊದಲ ಬಾರಿ ಓದಲು ಸ್ವಲ್ಪ ಕಠಿಣ ಅನ್ನಿಸಬಹುದು, ಆದರೆ ಓದುತ್ತಾ ಓದುತ್ತಾ, ಅದರ ಸೌಂದರ್ಯವನ್ನ ಸವಿಯುತ್ತ, ಆಗಾಗ ಮೆಲಕು ಹಾಕುತ್ತಾ ಇದ್ದರೆ ಇದರ ಸೊಗಸನ್ನ ಆನಂದಿಸ ಬಹುದು ಅನ್ನೋದು ನನ್ನ ವಯ್ಯಕ್ತಿಕ ಅನುಭವ.

| ಶ್ರೀ ಗಣೇಶಾಯ ನಮಃ |
|| ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು ||
||| ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ | ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |||

೧)
ವಿಶದಮಾದೊಂದು ಜೀವನಧರ್ಮದರ್ಶನವ
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು
ನಿಸದವಂ ಗ್ರಂಥಾನುಭವಗಳಿಂದಾರಿಸುತ
ಹೊಸೆದನೀ ಕಗ್ಗವನು ಮಂಕುತಿಮ್ಮ

೨)
ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
ಅವನರವಿಗೆಟುಕುವವೊಲೊಂದಾತ್ಮ ನಯವ
ಹವಣಿಸಿದನಿದನು ಪಾಮರಜನದ ಮಾತಿನಲಿ
ಕವನ ನೆನಪಿಗೆ ಸುಲಭ ಮಂಕುತಿಮ್ಮ

೩)
ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ ಮಂಕುತಿಮ್ಮ