Thursday, February 19, 2009

ಬಾಗ ೩

೭)
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯಲ್ಲಿ? ಚಿಮ್ತಿಸೆಲೋ ಮಂಕುತಿಮ್ಮ ||

೮)
ಬೇಕು ಬೇಕಿದು ಬೇಕು
ಬೇಕಿದೆನಗಿನ್ನೊಂದು |
ಬೇಕೆನುತ ಬೊಬ್ಬಿಡುತಲಿಹ ಘಟವನಿದನು ||
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ |
ಸಾಕೆನಿಪುದೆಂದಿಗೆಲೊ ಮಂಕುತಿಮ್ಮ ||

೯)
ಆನೆಗಾರ್ ಇರುವೆಗಾರ್ ಕಗೆಗಾರ್ ಕಪ್ಪೆಗಾರ್ |
ಕಾಣಿಸುವರನ್ನವನು? ಹಸಿವವರ ಗುರುವು ||
ಮನವನುಮಂತುದರಶಿಷ್ಯನವನಾ ರಸನೆ |
ನಾನಾವಯವಗಳಲಿ ಮಂಕುತಿಮ್ಮಾ ||

೧೦)
ದಾಸರೋ ನಾವೆಲ್ಲ ಶುನಕನಂದದಿ ಜಗದ |
ವಾಸನೆಗಳೆಳೆತಕ್ಕೆ, ದಿಕ್ಕುದಿಕ್ಕಿನಲಿ ||
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು |
ವಾಸನಾ ಕ್ಷಯಮೋಕ್ಷ ಮಂಕುತಿಮ್ಮ ||

೧೧)
ಶ್ವಾನ ತಿಪ್ಪೆಯ ಮೇಲೆ ಮಲಗಿರಲು ಪೂರ್ವಿಕ- |
ಜ್ಞಾನ ಪಶ್ಚಾತ್ತಾಪ ಶುಭಚಿಂತೆಯಂತೆ ||
ಏನೊ ವಾಸನೆ ಬೀಸಲದು ಹಾರಿ ಧುಮುಕುವುದು |
ಮಾನವನ ಮನಸಂತು ಮಂಕುತಿಮ್ಮ ||

೧೨)
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ಣುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದಾತ್ಮವನೆ ಮಂಕುತಿಮ್ಮ ||

No comments:

Post a Comment

I am underqualified for the task I have taken but I have taken it anyway and pray to the Lord that I do at least 0.001% justice to it. So I request you to provide constructive comments that can make this blog a better and more useful one.